ಇವತ್ತು ಕೆಲಸ ಮುಗಿಸಿಕೊಂಡು ಸ್ನೇಹಿತರೊಬ್ಬರಿಗೆ ಪುಸ್ತಕ ಕಳಿಸಬೇಕು ಅಂತ ಕೋರಿಯರ್ ಆಫೀಸ್ ಗೆ ಹೋಗುವಾಗ ದಾರಿಯಲ್ಲಿ ಸಿಕ್ಕ ಬೇಕರಿಯಲ್ಲಿ ಕುಳಿತು ಒಂದು ಚಾಕೊಲೇಟ್ ತಗೊಂಡು ಆ ಪುಸ್ತಕದ ಜೊತೆ ಹಾಕಿ ಪ್ಯಾಕ್ ಮಾಡಿ ವಿಳಾಸ ಬರೀತಾ ಕುತಿದ್ದೆ. ಅಷ್ಟರಲ್ಲಿ ಅಲ್ಲಿಗೆ ಒಂದು ಪುಟ್ಟ ಹುಡುಗಿ ಬಂದು ಚಾಕೋಲೆಟ್ ಕೆಕ್ ತಗೊಂಡು ತಿನ್ನೋಕೆ ನನ್ನ ಪಕ್ಕ ಬಂದು ಕುಳಿತಳು. ತಿನ್ನುತ್ತಾ ಇದ್ದಾಗಲೇ ಏನು ಅನಿಸಿತೋ ಏನೋ ನನಗೆ ಒಂದು ಕೇಕ್ ಪೀಸ್ ಕೊಡೋಕೆ ಬಂದಳು ನಾನು ಎಷ್ಟು ಬೇಡ ಅಂದರು ಅವಳು ಮಾತ್ರ ತನ್ನ ಹಠ ಬಿಡಲಿಲ್ಲ. ಆದರೆ ನಾನು ಏನಕ್ಕೆ ಕೊಡುತ್ತಿಯಾ ನೀನೆ ತಿನ್ನು ಅಂತ ಹೇಳಿದರು ಕೇಳಲಿಲ್ಲ. ಯಾಕೆ ಅಂತ ಕಾರಣ ಕೇಳಿದರೆ.. ನಾನು ಶಾಲೆಗೆ ಮೊದಲ ಸ್ಥಾನ ಬಂದಿದ್ದೀನಿ. ಶಾಲೆಯಲ್ಲಿ ಎಲ್ಲರಿಗೂ ಸ್ವೀಟ್ ಕೊಟ್ಟೆ. ಎಲ್ಲಾ ಖಾಲಿಯಾಗಿದೆ. ನಿಮಗೆ ಕೊಡೋಕೆ ಸ್ವೀಟ್ ಇಲ್ಲ. ಅದಕ್ಕೆ ಇದನ್ನೇ ತೆಗದೆಕೊಳ್ಳಿ ಎಂದಾಗ ಅವಳ ಬಗ್ಗೆ ಮನಸ್ಸಿನಲ್ಲಿ ಅಪಾರವಾದ ಹೆಮ್ಮೆ ಉಂಟಾಯಿತು. ಇಷ್ಟು ಚಿಕ್ಕ ವಯಸ್ಸಿಗೆ ಈ ತರದ ಒಳ್ಳೆಯ ಗುಣ ತುಂಬಾ ತುಂಬಾ ಇಷ್ಟವಾಯಿತು. ಎಲ್ಲೆ ಇದ್ದರೂ ಚೆನ್ನಾಗಿರು ಮುದ್ದು #ಆದ್ಯ. ಶುಭವಾಗಲಿ ನಿನ್ನ ಮುಂದಿನ ಜೀವನಕ್ಕೆ ..