ನಮಸ್ತೇ ಎಲ್ಲರಿಗೂ...
ನಿಜಕ್ಕೂ ಸಾರ್ಥಕ ರವಿವಾರ ಅನಿಸಿದ್ದು ನಿನ್ನೆ ನಡೆದ ಕಲಾಸೌರಭದ ಸಂಭ್ರಮದ ದಿನ..
ಪ್ರತಿ ವರ್ಷವೂ ಈ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದ ನಾನು ಈ ಸಲ ಭಾಗವಹಿಸಲೂ ಸಾಧ್ಯವಾಗುತ್ತಿಲ್ಲ ಎಂಬ ನೋವು ಇತ್ತು. ಕೊನೆಯ ಕ್ಷಣದಲ್ಲಿ ರದ್ದಾದ ನಿಗದಿತ ಪ್ರವಾಸ ಕಾರ್ಯಕ್ರಮದಿಂದಾಗಿ 4ನೇ ವರ್ಷದ ಕಲಾಸೌರಭದಲ್ಲಿ ಭಾಗವಹಿಸಲು ಸಾಧ್ಯವಾಯಿತು.
ಸಭೆಯಲ್ಲಿ ಅಧ್ಯಕ್ಷರು ಹೇಳಿದಂತೆ ಮನೆಯ ಕಾರ್ಯಕ್ರಮಕ್ಕೆ ಬರದೇ ಇದ್ದರೂ ನಮ್ಮ ಈ ಕಲಾಸೌರಭ ಕಾರ್ಯಕ್ರಮಕ್ಕೆ ತಪ್ಪದೇ ಬರ್ತಾರೆ ಅಂದಿದ್ದು ಅಕ್ಷರಶಃ ನಿಜ. ದೂರದ ಬೆಂಗಳೂರಿನಲ್ಲಿ ಇದ್ದು ಅನೇಕ ಶುಭ ಸಮಾರಂಭಗಳಿಗೆ ಬರೋಕೆ ಆಗ್ತಾ ಇರಲಿಲ್ಲ ಕೆಲಸದ ಒತ್ತಡವೂ ಕಾರಣ ಆಗಿರಬಹುದು. ಆದ್ರೆ ಜಿಲ್ಲೆಯಲ್ಲಿ ತನ್ನದೇ ಆದ ಛಾಪನ್ನು ಒತ್ತಿರುವ ನಮ್ಮ ಯುವಬಳಗದ ಕಾರ್ಯಕ್ರಮಕ್ಕೆ ಗೈರು ಹಾಜರಾಗಲು ಮನಸ್ಸು ಖಂಡಿತ ಒಪ್ತಾ ಇರಲಿಲ್ಲ...
ದೂರದ ಊರಲ್ಲಿ ಇರೋದರಿಂದಾಗಿ ಈ ಸಮಾರಂಭದ ಹಿಂದಿನ ಹಲವು ದಿನಗಳ ಹಲವು ಜನರ ಪರಿಶ್ರಮದಲ್ಲಿ ನಾವು ಭಾಗಿಯಾಗದೇ ಇರಲೂ ಸಾಧ್ಯವಿಲ್ಲ. ಆದ್ರೂ ಸಮಾರಂಭದ ದಿನ ನಮಗೆ ಅಂತ ವಹಿಸಿದ್ದ ಕೆಲಸವನ್ನು ಅಚ್ಚುಕಟ್ಟಾಗಿ ಕಾರ್ಯನಿರ್ವಹಣೆ ಮಾಡಿದ್ದೆವೆ ಯಾವುದೇ ತಪ್ಪಿಲ್ಲದೇ ಎಂಬ ವಿಶ್ವಾಸ ನಮ್ಮದು.
ಅಚ್ಚುಕಟ್ಟದ ಕಾರ್ಯಕ್ರಮ ಶಿಸ್ತಿನ ಸಿಪಾಯಿಯಂತೆ ದುಡಿದ ಅನೇಕ ಯುವಬಳಗದ ಸ್ನೇಹಿತರು, ಹಾಗೇ ನಮ್ಮ ಜೊತೆಗೆ ಕೈಗೂಡಿಸಿದ ಅನೇಕ ಹಿರಿಯ ಕಿರಿಯ ಸಹೃದಯಿಗಳ ಹಾರೈಕೆ ಈ ಒಂದು ಕಾರ್ಯಕ್ರಮ ಇಡೀ ಜಿಲ್ಲೆಯಲ್ಲೇ ಯುವಬಳಗದ ಕಾರ್ಯವೈಖರಿಯನ್ನು ಮೆಚ್ಚುವಂತೆ ಮಾಡಿದ್ದು ಸುಳ್ಳಲ್ಲ..
ಜಿಲ್ಲೆಯಲ್ಲಿ ಅನೇಕ ಮೊದಲುಗಳಿಗೆ ಕಾರಣಿಕರ್ತರಾದ ನಮ್ಮ ಯುವಬಳಗದ ಇನ್ನೊಂದು ಗರಿ ಸೇರ್ಪಡೆ ಆಗಿದ್ದು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಜಿಗಳ ಪುತ್ಥಳಿಯನ್ನು ಒಕ್ಕಲಿಗರ ಸಭಾಭವನದ ಮುಂದೆ ಪ್ರತಿಷ್ಟಾಪನೆ ಮಾಡಿದ್ದು ನಿಜಕ್ಕೂ ಸಂತಸದ ವಿಷಯ. ಇಂತಹ ಅನೇಕ ಮೊದಲುಗಳು ನಮ್ಮ ಯುವಬಳಗದಿಂದ ನಡೆಯಲಿ ಎಂಬುದೇ ನಮ್ಮ ಆಶಯ..
ನಮ್ಮ ಈ ಯುವಬಳಗದ ಪ್ರತಿ ಹೆಜ್ಜೆ ಯಲ್ಲೂ ಜೊತೆಯಾದ ಅನೇಕ ಸಹೃದಯಿ ದಾನಿಗಳಿಂದ ಹಾಗೇ ಯುವಬಳಗದ ಮೇಲೆ ವಿಶೇಷವಾದ ಅಭಿಮಾನ ಇಟ್ಟು ಪ್ರೋತ್ಸಾಹ ನೀಡುತ್ತಿರುವ ಅನೇಕ ಮಹನೀಯರಿಂದ ಇಂದೂ ನಮ್ಮ ಯುವಬಳಗ ಜಿಲ್ಲೆಯ ಹೊರಗೆ ಕೂಡ ಗುರುತಿಸುವಂತೆ ಮಾಡಿದೆ. ಇದೇ ತರಹದ ಅಭಿಮಾನ ಸದಾ ಯುವಬಳಗದ ಮೇಲೆ ಇರಲಿ ಇನ್ನಷ್ಟೂ ಕಾರ್ಯಕ್ರಮಗಳು ಈ ಮೂಲಕ ನಡೆದು ಅನೇಕ ಕಲಾಪ್ರತಿಭೆಗಳು ಜಿಲ್ಕೆಯ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರಸಿದ್ದೀಯಾಗಲಿ ಎಂಬುದೇ ನಮ್ಮೆಲ್ಲರ ಹಾರೈಕೆ..
ಕಲಾಸೌರಭದಲ್ಲಿ ಭಾಗವಹಿಸಿದ ಅನೇಕ ಪ್ರತಿಭೆಗಳು ಕೇವಲ ಈ ವೇದಿಕೆ ಮಾತ್ರವಲ್ಲದೇ ಇನ್ನೂ ಅನೇಕ ವೇದಿಕೆಗಳಲ್ಲಿ ಕೂಡ ಭಾಗವಹಿಸಿ ಸಮಾಜದ ಹೆಸರನ್ನು ಎಲ್ಲಾಕಡೆ ಪಸರಿಸುವಂತೆ ಮಾಡಲಿ. ಶುಭವಾಗಲಿ ಎಲ್ಲಾ ಪ್ರತಿಭೆಗಳಿಗೆ..
ಕೊನೆಯದಾಗಿ ಹಲವು ವರ್ಷಗಳಿಂದ ಯುವಬಳಗದ ಜೊತೆಗೆ ನಾನು ಇರೋದು ತುಂಬಾ ಖುಷಿಯ ಸಂಗತಿ .. ಇನ್ನೂ ಅನೇಕ ಯುವಜನತೆ ಈ ಯುವಬಳಗದ ಜೊತೆ ಕೈಜೋಡಿಸಲಿ ಎಂಬುದೇ ನಮ್ಮೆಲ್ಲರ ಆಶಯ.
ಯುವಬಳಗ ನಮ್ಮೆಲ್ಲರ ಬಳಗ..
https://drive.google.com/drive/folders/1R1KU6nLTUkuwRjo-hUmqcylMBIhJOWB9?usp=sharing
*ಗ್ರಾಮ ಒಕ್ಕಲು ಕಲಾ ಸೌರಭ 2023 ರ* ಫೋಟೋಸಗಳು ಈ ಮೇಲಿನ link ನಲ್ಲಿ ಇದೆ ಡೌನಲೋಡ್ ಮಾಡಿಕೊಳ್ಳಿ
ಧನ್ಯವಾದಗಳೊಂದಿಗೆ😍
ಪ್ರವೀಣ ಕಾಗಾಲ
ಬೆಂಗಳೂರು.



















