"ಕನ್ನಡ" ಈ ಪದ ಕೇಳೋಕೆ ಎಷ್ಟು ಚೆಂದ ಅಲ್ವಾ...! ನಿಜ ನಮ್ಮ ಕರುನಾಡಿನ ಈ ಹೆಮ್ಮೆಯ ನುಡಿ ನಮ್ಮ ಈ ಕನ್ನಡ. ಪ್ರತಿಯೊಬ್ಬರ ಹೃದಯದಲ್ಲಿ ವಿರಾಜಮನವಾಗಬೇಕಿದ್ದ ಕನ್ನಡ ಇಂದು ನಮ್ಮ ಈ ಬೆಂಗಳೂರಿನ ಕೆಲವು ಕನ್ನಡಿಗರಿಂದ ಮರೆಯಾಗುತ್ತಿರುವುದು ವಿಷಾದನೀಯ. ಕನ್ನಡಿಗರೇ ಕನ್ನಡ ಮಾತನಾಡದಿದ್ದರೆ ನಮ್ಮ ಭಾಷೆಯ ಸ್ಥಿತಿ ಏನಾಗಬಹುದು ಅಂತ ಒಮ್ಮೆ ಯೋಚಿಸಿ ಕನ್ನಡ ಬಂದರೂ ಕೂಡ ತಾವು ದಿನಂಪ್ರತಿ ವ್ಯವಹಾರ ಮಾಡುವ ಸ್ಥಳಗಳಲ್ಲಿ ಮಾತನಾಡದೆ ಇತರ ಭಾಷೆಯನ್ನು ಮಾತನಾಡುವುದು ಎಷ್ಟರಮಟ್ಟಿಗೆ ಸರಿ. ಕನ್ನಡ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಬೇಕಾದ ನಾವೇ ಈ ತರ ಮಾಡಿದರೆ ಕನ್ನಡ ಭಾಷೆಯು ಜಗತ್ತಿನಾದ್ಯಂತ ಪಸರಿಸುವುದಾದರೂ ಹೇಗೆ.. ಇದೇ ಉದ್ದೇಶವನ್ನು ಇಟ್ಟುಕೊಂಡು ಕಳೆದ ಎರಡು ವರ್ಷಗಳ ಹಿಂದೆ ಜನ್ಮ ತಾಳಿದ ನಮ್ಮ ಕಂಕಣ ಬಳಗ ಕನ್ನಡಿಗರೇ ಕನ್ನಡ ಮಾತಾಡಿ ಎಂಬ ಅಭಿಯಾನವನ್ನು ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಮಾಡುತ್ತಿರುವುದು ನಿಮಗೆಲ್ಲರಿಗೂ ಸಾಮಾಜಿಕ ಜಾಲತಾಣದ ಮೂಲಕ ಗೊತ್ತೆ ಇದೆ ಅದರ ಮುಂದುವರಿದ ಭಾಗ ಎನ್ನುವಂತೆ ಇಂದು ಸೂರ್ಯ ತನ್ನ ದಿನನಿತ್ಯದ ಕೆಲಸ ಆರಂಭ ಮಾಡುವ ಮುಂಚೆಯೇ ಕನ್ನಡಕ್ಕಾಗಿ ಕಂಕಣ ತೊಟ್ಟಿರುವ ನಮ್ಮ ಬಳಗದ ಸದಸ್ಯರು ಕಬ್ಬನ್ ಪಾರ್ಕಿನ ಪಾದಚಾರಿ ಮಾರ್ಗದಲ್ಲಿ ನಿಂತು ಕನ್ನಡ ಘೋಷವಾಕ್ಯ ಇರುವ ಫಲಕಗಳನ್ನು ಹಿಡಿದು ನಿಂತು ಕನ್ನಡದ ಡಿಂಡಿಮವನ್ನು ಸಾರಿದರು. ನಮ್ಮ ಅಭಿಯಾನದ ಸ್ಥಳದಲ್ಲಿ ಇಂದು ಮ್ಯಾರಥಾನ್ ಕೂಡ ಇದ್ದರಿಂದ ನಮ್ಮ ಅಭಿಯಾನದ ಮೂಲಕ ಕನ್ನಡ ಉಳಿಸಿ ಕೂಗು ಅತಿ ಹೆಚ್ಚು ಜನರನ್ನು ತಲುಪವಲ್ಲಿ ಯಶಸ್ವಿಯಾಯಿತು. ಸುಮಾರು ಐದರಿಂದ ಆರು ಸಾವಿರ ಜನರಲ್ಲಿ ಕೆಲವರಾದರೂ ನಮ್ಮ ಅಭಿಯಾನದ ಉದ್ದೇಶ ತಿಳಿದುಕೊಂಡು ನಮ್ಮ ಜೊತೆ ಪಾಲ್ಗೊಂಡಿದ್ದು ಅಲ್ಲದೇ ನಮ್ಮನ್ನು ಉತ್ತೇಜನಗೊಳಿಸಿದ್ದು ನಮ್ಮಲ್ಲಿನ ಉತ್ಸಾಹವನ್ನು ಮತ್ತಷ್ಟು ಮಗದಷ್ಟು ಇಮ್ಮಡಿಗೊಳೊಸಿತು. ಇನ್ನೂ ನಮ್ಮ ಕಂಕಣ ಬಳಗದ ಸಾರಥಿ ಶ್ರೀ ಕವಿರಾಜ್ ಸರ್ ಇವರ ನೇತೃತ್ವದಲ್ಲಿ ನಡೆದ ನಮ್ಮ ಅಭಿಯಾನವನ್ನು ಬೆಂಬಲಿಸಲು ಬಂದ ಕನ್ನಡದ ಖ್ಯಾತ ಗಾಯಕಿ ಡಾ.ಶಮಿತಾ ಮಲ‍್ನಾಡ್ ಇವರು ತಮ್ಮ ಹಿತನುಡಿ ಕನ್ನಡದ ಮೇಲಿನ ತಮ್ಮ ಪ್ರೀತಿ ಹಾಗೆಯೇ ಸುಂದರವಾದ ಭಾವಗೀತೆ ಹಾಡುವುದರ ಮೂಲಕ ನಮ್ಮ ಬಳಗದ ಪ್ರತಿಯೊಬ್ಬರ ಹೃದಯವನ್ನು ಗೆದ್ದರು. ಇನ್ನು ನಮ್ಮ ಬಳಗಕ್ಕೆ ಹೊಸದಾಗಿ ಸೇರಿದ ಅನೇಕ ಉತ್ಸಾಹಿ ಸದಸ್ಯರು ಹಾಗೂ ನಮ್ಮ ಬಳಗದಲ್ಲಿ ಮೊದಲಿನಿಂದ ಇರುವ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ ಅಭಿಯಾನದ ಯಶಸ್ವಿಗೆ ಪ್ರಮುಖ ಕಾರಣ. ಹೀಗೆ ನಮ್ಮ ಈ ಕನ್ನಡಮ್ಮನ ಸೇವೆ ಮುಂದುವರೆಯಲಿ ಹಾಗೆ ನಿಮ್ಮೆಲ್ಲರ ಪ್ರೀತಿಪೂರ್ವಕ ಸಹಕಾರ ನಮ್ಮ ಬಳಗದ ಮೇಲೆ ಇರಲಿ. ಕನ್ನಡದ ಹಿರಿಮೆ ಈ ಜಗತ್ತಿಗೆ ತಿಳಿಯುವಂತೆ ಆಗಲಿ ಎಂಬುದೆ ನಮ್ಮ ಆಶಯ.
ಧನ್ಯವಾದಗಳೊಂದಿಗೆ ,
ನಿಮ್ಮ ಪ್ರವೀಣ ಕಾಗಾಲ.
ಭಾನುವಾರ, ಫೆಬ್ರವರಿ 26, 2017
ಕಂಕಣ ಅಭಿಯಾನ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ